Friday, February 26, 2010
ಗದುಗಿನ ಸಮ್ಮೇಳನದ ಚಿತ್ರಗಳು
Tuesday, February 23, 2010
Friday, February 19, 2010
76ನೇ ಸಾಹಿತ್ಯ ಸಮ್ಮೇಳನ: ಡಾ. ಗೀತಾ ನಾಗಭೂಷಣ

ಫೆಬ್ರುವರಿ 19 ರಿಂದ 21ರವರೆಗೆ ಕರ್ನಾಟಕದ ಗದುಗಿನಲ್ಲಿ ನಡೆಯುತ್ತಿರುವ 76ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ನಾಡೋಜ ಪ್ರಶಸ್ತಿ ವಿಜೇತೆ ಶ್ರೀಮತಿ ಡಾ. ಗೀತಾ ನಾಗಭೂಷಣ ರವರು ಆಯ್ಕೆಯಾಗಿರುತ್ತಾರೆ. ಡಾ. ಗೀತಾ ನಾಗಭೂಷಣ ರವರು ಉತ್ತರ ಕರ್ನಾಟಕದ ಬಡವರ ಬದುಕಿಗೆ ದನಿ ನೀಡಿದ ಸಾಹಿತಿ. ಇವರ ಸಾಹಿತ್ಯದಲ್ಲಿ ಗುಲ್ಬರ್ಗಾ ಪ್ರಾಂತ್ಯದ ಭಾಷೆಯ ಸೊಗಡನ್ನು ನಾವು ಕಾಣಬಹುದು.
ಗೀತಾ ನಾಗಭೂಷಣ ರವರ ಕಥೆ, ಕಾದಂಬರಿಗಳು ಉತ್ತರ ಕರ್ನಾಟಕ ಜನಜೀವನದ ಚಿತ್ರಣಗಳನ್ನು ಹಿಡಿದಿಡಿವಲ್ಲಿ ಸಾಧ್ಯವಾಗಿದೆ. ಗ್ರಾಮೀಣ ಭಾಗದಲ್ಲಿ ನಡೆಯುತ್ತಿದ್ದ ಬಡವರ, ದಲಿತರ ಶೋಷಣೆ, ಮೂಡನಂಬಿಕೆಗಳ ಆಚರಣೆ ಮುಂತಾದವು ಇವರ ಸಾಹಿತ್ಯ ಕೃಷಿ ಮುಖ್ಯ ಪ್ರೇರಣೆಯಂತೆ. ಈ ರೀತಿಯ ಶೋಷಣೆ, ಮೂಡನಂಬಿಕೆಗಳ ವಿರೋಧಿಸುತ್ತಾ ಮಹಿಳೆಯ ಸಬಲೀಕರಣ ಕುರಿತು ತಮ್ಮ ಸಾಹಿತ್ಯದ ಮೂಲಕ ಹೋರಾಟ ನಡೆಸಿದವರಾಗಿರುತ್ತಾರೆ.
ಇವರು ತಮ್ಮ "ಬದುಕು" ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿರುತ್ತಾರೆ.
ದ್ವಿತಿಯ ಸಮ್ಮೇಳನ
ಬೆಳವಲ ನಾಡಿನಲ್ಲಿ ಈ ಹಿಂದೆ 1961ರಲ್ಲಿ ಡಿಸೆಂಬರ್ 26 ರಿಂದ 28ರವರೆಗೆ ಮೂರು ದಿನಗಳ ಕಾಲ 43ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಜಾತ್ರೆ ನಡೆದಿತ್ತು. ಆ ದಿನಗಳಲ್ಲಿ ಹಿರಿಯ ಸಾಹಿತಿಗಳಾದ ಪ್ರೋ. ಕೆ.ಜಿ.ಕುಂದಣಗಾರ ರವರು ಸಮ್ಮೇಳನದ ಅಧ್ಯಕ್ಷರಾಗಿದ್ದರು. ಮುಖ್ಯಮಂತ್ರಿಗಳಾದ ಕೆಂಗಲ್ ಹನುಮಂತಯ್ಯ ರವರು ಸಮ್ಮೇಳನವನ್ನು ಉದ್ಘಾಟಿಸಿದರು.
ಅಂದು ಸಮ್ಮೇಳನಕ್ಕಾಗಿ ನಿರ್ಮಿಸಿದ ಹೆಬ್ಬಾಗಿಲು ಇಂದಿಗೂ ನೋಡಬಹುದಾಗಿದೆ. ತೋಂಟದಾರ್ಯ ಶ್ರೀಗಳು ಸಹ ಈ ಸಮ್ಮೇಳನದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆ ಸಮಯದಲ್ಲಿ ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಲು, ಕನ್ನಡ ರಾಜ್ಯಭಾಷೆ ಮಾಡಲು, ಪ್ರಮುಖ ಸ್ಥಳಗಳಲ್ಲಿ ಗ್ರಂಥಾಲಯಗಳ ಸ್ಥಾಪನೆ, ಗಡಿನಾಡುಗಳನ್ನು ಅಭಿವೃದ್ಧಿಪಡಿಸುವ ಕುರಿತಂತೆ ಅನೇಕಾನೇಕ ಹಿತಕಾರ್ಯಗಳನ್ನು ಕೈಗೆತ್ತಿಕೊಳ್ಳುವ ಕುರಿತು ಪ್ರಮುಖ ಚರ್ಚೆಗಳನ್ನು ಸಮ್ಮೇಳನದಲ್ಲಿ ಪ್ರತಿಪಾದಿಸಲಾಗಿತ್ತು. ಅಲ್ಲದೇ ಅಂದಿನ ಸಮ್ಮೇಳನದಲ್ಲೂ ಕೂಡ, ಸಾಹಿತ್ಯಾಸಕ್ತರಿಗೂ, ಅಕ್ಷರಪ್ರಿಯರು ಅಪಾರ ಸಂಖ್ಯೆಯಲ್ಲಿ ಹಾಜರಿದ್ದು, ಸಮ್ಮೇಳನದ ಯಶಸ್ಸಿಗೆ ಕಾರಣರಾಗಿದ್ದರು. ದಾಖಲೆ ಪ್ರಮಾಣದಲ್ಲಿ ಪುಸ್ತಕಗಳ ಮಾರಾಟ ಕೂಡ ಕಂಡಿತ್ತು.
ಒಟ್ಟಿನಲ್ಲಿ ಈಗ ನಡೆಯುತ್ತಿರುವ ದ್ವಿತಿಯ ಸಮ್ಮೇಳನವು ... ಅದ್ವಿತೀಯ ಸಮ್ಮೇಳನವಾಗಬೇಕೆಂದು ನಮ್ಮೆಲ್ಲರ ಕೋರಿಕೆ.

ಒಟ್ಟಿನಲ್ಲಿ ಈಗ ನಡೆಯುತ್ತಿರುವ ದ್ವಿತಿಯ ಸಮ್ಮೇಳನವು ... ಅದ್ವಿತೀಯ ಸಮ್ಮೇಳನವಾಗಬೇಕೆಂದು ನಮ್ಮೆಲ್ಲರ ಕೋರಿಕೆ.
ಅಕ್ಷರ ಪ್ರೇಮಿಗಳಿಗೆ ಸ್ವಾಗತ...!
ನಮಸ್ಕಾರ...
ದಿನಾಂಕ: 19.02.2010ರಿಂದ ಕರ್ನಾಟಕದ 76ನೇ ಕನ್ನಡ ಸಾಹಿತ್ಯ ಸಮ್ಮೇಳನವು ರಾಜ್ಯದ ಗದುಗಿನಲ್ಲಿ ನಡೆಯುತ್ತಿರುವುದು ನಮಗೆಲ್ಲಾ ತಿಳಿದ ವಿಷಯವೇ ಆಗಿದೆ. ಕಳೆದ ವರ್ಷ 75ನೇ ಕನ್ನಡ ಸಾಹಿತ್ಯ ಸಮ್ಮೇಳನವು ಐತಿಹಾಸಿಕ ನಗರಿ ಚಿತ್ರದುರ್ಗದಲ್ಲಿ ನಡೆದು ಇತಿಹಾಸ ಸೃಷ್ಟಿಸಿದ್ದು ಸಹ ಈಗ ಇತಿಹಾಸ. 1961ನೇ ಸಾಲಿನ ಗದಗದಲ್ಲಿ ನಡೆದ ಸಾಹಿತ್ಯ ಸಮ್ಮೇಳನವು ಇದೀಗ ಗದಗ ನಗರದಲ್ಲಿ ಮತ್ತೆ 49 ವರ್ಷಗಳ ಬಳಿಕ ಮತ್ತದೇ ಅಕ್ಷರ ಜಾತ್ರೆಗೆ ಸಿದ್ದವಾಗಿದೆ.
ಬನ್ನಿ ಗೆಳೆಯರೇ.... ನಾವೆಲ್ಲರೂ ಸೇರಿ ಈ ಅಕ್ಷರ ಜಾತ್ರೆಯ ತೇರನ್ನೆಳೆಯೋಣ ಬನ್ನಿ...
ನಿಮ್ಮ
ಆರ್. ರಾಘವೇಂದ್ರ, ಚಳ್ಳಕೆರೆ
ಚಿತ್ರದುರ್ಗ ಜಿಲ್ಲೆ. ದೂರವಾಣಿ: 9916822102
www.chitharadurga.com
http://durgasahityasammelana.blogspot.com
http://banadahoogalu.blogspot.com
http://nannedepreethi.blogspot.com
http://chitharaarticls.blogspot.com

Subscribe to:
Posts (Atom)