Friday, February 19, 2010

76ನೇ ಸಾಹಿತ್ಯ ಸಮ್ಮೇಳನ: ಡಾ. ಗೀತಾ ನಾಗಭೂಷಣಫೆಬ್ರುವರಿ 19 ರಿಂದ 21ರವರೆಗೆ ಕರ್ನಾಟಕದ ಗದುಗಿನಲ್ಲಿ ನಡೆಯುತ್ತಿರುವ 76ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ನಾಡೋಜ ಪ್ರಶಸ್ತಿ ವಿಜೇತೆ ಶ್ರೀಮತಿ ಡಾ. ಗೀತಾ ನಾಗಭೂಷಣ ರವರು ಆಯ್ಕೆಯಾಗಿರುತ್ತಾರೆ. ಡಾ. ಗೀತಾ ನಾಗಭೂಷಣ ರವರು ಉತ್ತರ ಕರ್ನಾಟಕದ ಬಡವರ ಬದುಕಿಗೆ ದನಿ ನೀಡಿದ ಸಾಹಿತಿ. ಇವರ ಸಾಹಿತ್ಯದಲ್ಲಿ ಗುಲ್ಬರ್ಗಾ ಪ್ರಾಂತ್ಯದ ಭಾಷೆಯ ಸೊಗಡನ್ನು ನಾವು ಕಾಣಬಹುದು.
ಗೀತಾ ನಾಗಭೂಷಣ ರವರ ಕಥೆ, ಕಾದಂಬರಿಗಳು ಉತ್ತರ ಕರ್ನಾಟಕ ಜನಜೀವನದ ಚಿತ್ರಣಗಳನ್ನು ಹಿಡಿದಿಡಿವಲ್ಲಿ ಸಾಧ್ಯವಾಗಿದೆ. ಗ್ರಾಮೀಣ ಭಾಗದಲ್ಲಿ ನಡೆಯುತ್ತಿದ್ದ ಬಡವರ, ದಲಿತರ ಶೋಷಣೆ, ಮೂಡನಂಬಿಕೆಗಳ ಆಚರಣೆ ಮುಂತಾದವು ಇವರ ಸಾಹಿತ್ಯ ಕೃಷಿ ಮುಖ್ಯ ಪ್ರೇರಣೆಯಂತೆ. ಈ ರೀತಿಯ ಶೋಷಣೆ, ಮೂಡನಂಬಿಕೆಗಳ ವಿರೋಧಿಸುತ್ತಾ ಮಹಿಳೆಯ ಸಬಲೀಕರಣ ಕುರಿತು ತಮ್ಮ ಸಾಹಿತ್ಯದ ಮೂಲಕ ಹೋರಾಟ ನಡೆಸಿದವರಾಗಿರುತ್ತಾರೆ.
ಇವರು ತಮ್ಮ "ಬದುಕು" ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿರುತ್ತಾರೆ.

No comments:

Post a Comment