Friday, February 19, 2010

ದ್ವಿತಿಯ ಸಮ್ಮೇಳನ

ಬೆಳವಲ ನಾಡಿನಲ್ಲಿ ಈ ಹಿಂದೆ 1961ರಲ್ಲಿ ಡಿಸೆಂಬರ್ 26 ರಿಂದ 28ರವರೆಗೆ ಮೂರು ದಿನಗಳ ಕಾಲ 43ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಜಾತ್ರೆ ನಡೆದಿತ್ತು. ಆ ದಿನಗಳಲ್ಲಿ ಹಿರಿಯ ಸಾಹಿತಿಗಳಾದ ಪ್ರೋ. ಕೆ.ಜಿ.ಕುಂದಣಗಾರ ರವರು ಸಮ್ಮೇಳನದ ಅಧ್ಯಕ್ಷರಾಗಿದ್ದರು. ಮುಖ್ಯಮಂತ್ರಿಗಳಾದ ಕೆಂಗಲ್ ಹನುಮಂತಯ್ಯ ರವರು ಸಮ್ಮೇಳನವನ್ನು ಉದ್ಘಾಟಿಸಿದರು.ಅಂದು ಸಮ್ಮೇಳನಕ್ಕಾಗಿ ನಿರ್ಮಿಸಿದ ಹೆಬ್ಬಾಗಿಲು ಇಂದಿಗೂ ನೋಡಬಹುದಾಗಿದೆ. ತೋಂಟದಾರ್ಯ ಶ್ರೀಗಳು ಸಹ ಈ ಸಮ್ಮೇಳನದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆ ಸಮಯದಲ್ಲಿ ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಲು, ಕನ್ನಡ ರಾಜ್ಯಭಾಷೆ ಮಾಡಲು, ಪ್ರಮುಖ ಸ್ಥಳಗಳಲ್ಲಿ ಗ್ರಂಥಾಲಯಗಳ ಸ್ಥಾಪನೆ, ಗಡಿನಾಡುಗಳನ್ನು ಅಭಿವೃದ್ಧಿಪಡಿಸುವ ಕುರಿತಂತೆ ಅನೇಕಾನೇಕ ಹಿತಕಾರ್ಯಗಳನ್ನು ಕೈಗೆತ್ತಿಕೊಳ್ಳುವ ಕುರಿತು ಪ್ರಮುಖ ಚರ್ಚೆಗಳನ್ನು ಸಮ್ಮೇಳನದಲ್ಲಿ ಪ್ರತಿಪಾದಿಸಲಾಗಿತ್ತು. ಅಲ್ಲದೇ ಅಂದಿನ ಸಮ್ಮೇಳನದಲ್ಲೂ ಕೂಡ, ಸಾಹಿತ್ಯಾಸಕ್ತರಿಗೂ, ಅಕ್ಷರಪ್ರಿಯರು ಅಪಾರ ಸಂಖ್ಯೆಯಲ್ಲಿ ಹಾಜರಿದ್ದು, ಸಮ್ಮೇಳನದ ಯಶಸ್ಸಿಗೆ ಕಾರಣರಾಗಿದ್ದರು. ದಾಖಲೆ ಪ್ರಮಾಣದಲ್ಲಿ ಪುಸ್ತಕಗಳ ಮಾರಾಟ ಕೂಡ ಕಂಡಿತ್ತು.

ಒಟ್ಟಿನಲ್ಲಿ ಈಗ ನಡೆಯುತ್ತಿರುವ ದ್ವಿತಿಯ ಸಮ್ಮೇಳನವು ... ಅದ್ವಿತೀಯ ಸಮ್ಮೇಳನವಾಗಬೇಕೆಂದು ನಮ್ಮೆಲ್ಲರ ಕೋರಿಕೆ.

2 comments: